ಡೆನೆಬ್
	ಸಿಗ್ನಸ್(ರಾಜಹಂಸ) ನಕ್ಷತ್ರಪುಂಜದ ಪ್ರಥಮ ನಕ್ಷತ್ರ ((-ಸಿಗ್ನಿ). ತೋರ್ಕೆ ಉಜ್ಜ್ವಲತೆಯ (ಅಪ್ಪೇರೆಂಟ್ ಬ್ರೈಟ್‍ನೆಸ್) ರೀತ್ಯ ನಕ್ಷತ್ರಗಳನ್ನು ಪಂಕ್ತಿಸಿದಾಗ (ಸೂರ್ಯನಿಗೆ ಮೊದಲ ಮಣೆ ದೊರೆಯುತ್ತದೆ) ಈ ಯಾದಿಯಲ್ಲಿ ಡೆನೆಬ್‍ನ್ ಸ್ಥಾನ 18. ಇದರ ತೋರ್ಕೆ ಕಾಂತಿಮಾನ (ಮ್ಯಾಗ್ನಿಟ್ಯೂಡ್) 1.33, ಶುದ್ಧ ಕಾಂತಿಮಾನ-5.2, ದೂರ 465 ಬೆ.ವ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ